Primary Kannada Medium

ಡೊಂಬಿವಲಿ ಕರ್ನಾಟಕ ಸಂಘವು ಕರ್ನಾಟಕದಿಂದ ವಲಸೆ ಬಂದಿರುವ ಕನ್ನಡದ ಮಕ್ಕಳಿಗೆ ಮಾತೃಭಾಷೆಯಾದ ಕನ್ನಡದಲ್ಲಿ ಶಿಕ್ಷಣವನ್ನು ಕೋಡಿಸುವ ಸದಿಚ್ಛೆಯಿಂದ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹೆಸರಿನಲ್ಲಿ ಸ್ಥಾಪಿಸಲಾದ ಮಂಜುನಾಥ ವಿದ್ಯಾಲಯವು ಕ್ರಿ.ಶ. 1988 ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ( 100% ) ನೂರು ಪ್ರತಿಶತ ಮಾನ್ಯತೆ ಪಡೆದ ಈ ವಿದ್ಯಾಲಯವು ಇಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಹೆಸರು ಪಡೆದಿದೆ 50ನೇ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ಲಾಟಿನಮ್ ಜುಬ್ಲಿಕೆ ಕಾಲಿಡುತ್ತಿರುವುದು ಕನ್ನಡಿಗರಿಗೆ ತುಂಬಾ ಹೆಮ್ಮೆಯ ವಿಷಯ.

ಕನ್ನಡವನ್ನು ಉಳಿಸಿ ಬೆಳೆಸುವ ಮಹಾದಾಸೆಯಿಂದ 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ, ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ವರ್ಗಗಳಲ್ಲಿ ಕ್ರಮಾಂಕ ಪಡೆದ ಮಕ್ಕಳಿಗೆ ಹಾಗೂ ವಾರ್ಷಿಕ ಪಂದ್ಯಾಟಗಳಲ್ಲಿ ವಿಜಯಶಾಲಿಯಾದ ಮಕ್ಕಳಿಗೆ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ಮಕ್ಕಳಲ್ಲಿ ಯಾವುದೇ ರೀತಿಯ ಜಾತಿ, ಧರ್ಮಗಳ ಭೇದ ಭಾವ ಮೂಡಿಸದೆ ದೇಶಪ್ರೇಮ ಮತ್ತು ದೇಶ ಹಿತದ ಕುರಿತು ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳ ಶಾರೀರಿಕ ವಿಕಾಸ, ಬೌದ್ಧಿಕ ವಿಕಾಸ, ಮಾನಸಿಕ ವಿಕಾಸ, ಭಾವನಿಕ ವಿಕಾಸ, ಸಾಮಾಜಿಕ ವಿಕಾಸ, ಸಾಂಸ್ಕೃತಿಕ ವಿಕಾಸ, ಹೀಗೆ ಸರ್ವಾಂಗೀಣ ವಿಕಾಸದ ಬಗ್ಗೆ ಕಾಳಜಿ ವಹಿಸಲಾಗುತ್ತದೆ

ಅನ್ನದಾನ ಮಾಡಿದರೆ ಒಂದು ದಿವಸಕ್ಕಾಗುವುದು ಆದರೆ ಶಿಕ್ಷಣ ದಾನ ಮಾಡಿದರೆ ಜೀವನಕ್ಕೆ ದಾರಿಯಾಗುವುದು ಎಂದು ತಿಳಿದ ನಮ್ಮ ಕರ್ನಾಟಕ ಸಂಘವು, “ತಮಸೋಮ ಜ್ಯೋತಿರ್ಗಮಯ ಮೃತ್ಯುರ್ಮಾ  ಅಮೃತಂಗಮಯ” ಅಂದರೆ ಮಕ್ಕಳಲ್ಲಿ ಅಜ್ಞಾನ ಎಂಬ ಅಂಧಕಾರ ದೂರ ಇಟ್ಟು ಸುಜ್ಞಾನವೆಂಬ ಬೆಳಕು ಮೂಡಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ. ಶಿಕ್ಷಣದ ಬಗೆಗಿರುವ ಸಂಸ್ಥೆಯ ಆದರ್ಶ ವಿಚಾರಗಳು ಹೀಗಿವೆ.

ಶಿಕ್ಷಣ ಮಾನವನ ಪ್ರಗತಿಗೆ ಆಧಾರವಾಗಿದೆ, ಶಿಕ್ಷಣ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಇರುವ ಸಾಧನವಾಗಿದೆ. ಶಿಕ್ಷಣದಿಂದ ಒಬ್ಬ ವ್ಯಕ್ತಿ ಜೀವನದಲ್ಲಿ ಉತ್ತಮ ಬೆಳಕು ಕಾಣಬಹುದು. ಶಿಕ್ಷಣ ಕೇವಲ ಜ್ಞಾನಕ್ಕಾಗಿ ಅಲ್ಲ, ಮಾನವನಲ್ಲಿ ಜ್ಞಾನ ವೃದ್ಧಿಯ ಜೊತೆಗೆ ನೀತಿ, ಸನ್ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ಶಿಕ್ಷಣ.

ವಿಷಯ ವಿವರಣೆ.

ನಮ್ಮ ಜೀವನಕ್ಕೆ ಶಿಕ್ಷಣ ಬಹಳ ಮುಖ್ಯ. ಶಿಕ್ಷಣವಿಲ್ಲದೆ ನಾವು ನಮ್ಮ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ನಮ್ಮ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣವು ಒಂದು ಪ್ರಮುಖ ಸಾಧನವಾಗಿದೆ. ಭಾರತದಲ್ಲಿ ಅಧಿಕಾಲದಿಂದಲೂ ನಡೆದುಕೊಂಡು ಬಂದ ಗುರುಕುಲ ಶಿಕ್ಷಣ ವ್ಯವಸ್ಥೆಯು ಜಗತ್ತಿನ ಅತ್ಯಂತ ಪುರಾತನ ಶಿಕ್ಷಣ ವ್ಯವಸ್ಥೆ ಆಗಿದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುವುದು ಮುಖ್ಯ. ಇದು ನಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ನಮ್ಮ ಆಲೋಚನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಂತೋಷಕ್ಕಾಗಿ ಶಿಕ್ಷಣ ಅವಶ್ಯಕವಾಗಿದೆ. ಶಿಕ್ಷಣವಿಲ್ಲದೆ ಜೀವನದಲ್ಲಿ ಯಾವುದೇ ಸಂತೋಷವಿಲ್ಲ. ಶಿಕ್ಷಣ ಯಾವಾಗಲೂ ವ್ಯಕ್ತಿಗಳ ಜೀವನದಲ್ಲಿ ಸಿಹಿ ಕಹಿಗಳನ್ನು ತರುತ್ತದೆ. ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿ ಆರ್ಥಿಕ ಸುಧಾರಣೆ ಹೊಂದಿ ರಾಜಕೀಯ ಸ್ವಾತಂತ್ರ್ಯವನ್ನು ಪಡೆದು ಮತ್ತು ಪ್ರತಿ ವ್ಯಕ್ತಿಯು ಸಮಾಜಕ್ಕೆ ಅನನ್ಯ ಕೊಡುಗೆಯನ್ನು ನೀಡುವಂತೆ ಮಾಡುವುದೇ ಶಿಕ್ಷಣ. ನೈತಿಕ ಮೌಲ್ಯಗಳ ಬೆಳವಣಿಗೆಯು ಶಿಕ್ಷಣದ ಗುರಿಯಾಗಬೇಕು. ಮತ್ತು ಸಮಾಜದ ಸುಧಾರಣೆಗೆ ಕೆಲಸ ನಿರ್ವಹಿಸುವುದು ವಿದ್ಯಾವಂತರ ಗುರಿಯಾಗಬೇಕು.

ಡಾ. ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣದಿಂದ ಯಾರನ್ನೂ ಸಹ ವಂಚಿತರನ್ನಾಗಿ ಮಾಡಬಾರದು ಇದು ಈ ದೇಶದ ಎಲ್ಲಾ ಜನರನ್ನು ತಲುಪಿಸಬೇಕು ಮತ್ತು ಶೋಷಿತ ವರ್ಗದವರು ಅದನ್ನು ಕನಿಷ್ಠ ವೆಚ್ಚದಲ್ಲಿ ಪಡೆಯುತ್ತಿರಬೇಕು. ಆದ್ದರಿಂದ ಅವರು ಸಂವಿಧಾನದಲ್ಲಿ ಶಿಕ್ಷಣವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿ ನೀಡಿದರು. ಪ್ರತಿಯೊಬ್ಬ ವ್ಯಕ್ತಿ ಪ್ರಜಾವಂತರಾಗಬೇಕು ಪಡೆದ ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕವಾಗಿ ಹಾಗೂ ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಶಿಕ್ಷಣ.

ಶಿಕ್ಷಣ ಪಡೆದು ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಬೆಳವಣಿಗೆಗೆ ಸಾಧ್ಯವಾಗುವುದು. ಶಿಕ್ಷಣ ದೇಶಭಕ್ತಿಯ ಶಿಸ್ತಿನ ಮತ್ತು ಉತ್ಪಾದಕ ಮಾನವನ ಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜದ ಪ್ರತಿ ಪ್ರಜೆ ಶಿಕ್ಷಣ ಪಡೆದು ತನ್ನ ಸ್ವಯಂ ಅಭಿವೃದ್ಧಿಯ ಜೊತೆಗೆ ಸಮಾಜದ ಒಳಿತಿಗಾಗಿ ಹೋರಾಟ, ಹೋರಾಟಕ್ಕಾಗಿ ಸಂಘಟನೆ ಮಾಡುವುದು ಅತ್ಯಗತ್ಯವಾಗಿದೆ.

ಧನ್ಯವಾದಗಳು..

ಕನಾ೯ಟಕ ಸಂಘ ಡೊಂಬಿವಲಿ ವತಿಯಿಂತ ಉಚಿತ ಸಮವಸ್ತ್ರ
ವಿತರಣೆ ಕಾಯ೯ಕ್ರಮ.

No Records Found

No Records Found

No Records Found

Teacher Information (2023-24)

NAME DESIGNATION QUALIFICATION
Mr.Nagappa Sayabanna. Pujari
HEAD MASTER
B.A. D.Ed
Mrs.Bharati Raosaheb Kadam
Ass. Teacher
HSC ITC
Mrs.Pooja Vijay Dusane
Ass. Teacher
B.A. D.Ed
Mr. Suresh Ramchandra Birajdar
Ass. Teacher
SSC D.Ed
Mr. Ramesh Sharanappa Khilari
GR.Teacher
M.A. D.Ed
Mr. Suresh Jeevanrao Patil
Asst. Teacher
B.A. D.Ed
NAME DESIGNATION
Shri. Sukumar N Shetty
Chairman
Shri. Nagappa S. Pujari - (H.M.PKM)
Secretary (Ex-Officio)
Shri.Vasant N. Suvarna
Members
Shri. Rajeev M. Bhandary
Members
Shri Devdas L Kulal
Members
Shri. Anand D. Shetty
Members
Shri. Diwakar T. Shetty Indrali (ChairmanKS- Ex-officio)
Members
Dr. Dilip K. Koparde (Secretary SCC)
Members
Shri Ajit B. Umrani (Secretary KS-Ex-officio)
Members
Shri.Tharanath S.Amin(Treasurer KS- Ex-officio)
Members
Scroll to Top